ಶುಕ್ರವಾರ, ಆಗಸ್ಟ್ 5, 2011

ಆಗಸ್ಟ್ ೦೧ ~ ೦೫

ಈ ವಾರ ಅಂತ ವಿಶೇಷವೆನೂ ಇಲ್ಲ. ಕರ್ನಾಟಕದ ರಾಜಕಾರಣದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ರಾಜಕಾರಣ ಮತ್ತಷ್ಟೂ ಅಸಹ್ಯ ಮೊಡಿಸಿತು. ನಗುಮುಖದ ಸದಾನಂದ ಗೌಡರು ಕರ್ನಾಟಕದ ೨೬ ನೇ ಮುಖ್ಯಮಂತ್ರಿಯಾದರು. ಅವರು ನಗುವ ರೀತಿಯಲ್ಲೇ ಕರ್ನಾಟಕದ ಜನತೆಯನ್ನೂ ನಗಿಸುವರೋ? ಜನತೆಯಲ್ಲಿ ಅಳುವನ್ನು ತರಿಸುವರೋ? ಕಾದು ನೋಡಬೇಕು. ನನ್ನ ಕಾರ್ಖಾನೆಯಲ್ಲಿ ಅಂತಹ ವಿಶೇಷವೇನೂ ಇಲ್ಲ. ಮನಸ್ಸಿಗೆ ತುಂಬಾ ಬೇಸರವಂತೂ ಕಾಡುತ್ತಿದೆ. ಕೊನೆ ಯಾವಾಗಲೋ? ಯಕ್ಷ ಪ್ರಶ್ನೆಯಾಗಿದೆ.

ಅಮ್ಮನ ಜೊತೆ ಜಗಳವಾಡಿದೆ. ಅಮ್ಮ ನನ್ನ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಕಾರಣ ತುಂಬಾ ಚಿಕ್ಕದಾದರೂ ಜಗಳದ ಪರಿಣಾಮ ಮಾತ್ರ ೨~೩ ದಿನಗಳು ಮನಸ್ಸಿನ ನೆಮ್ಮದಿಯನ್ನು ಹಾಳುಮಾಡಿದ್ದಂತೂ ನಿಜ.

ಅನೀಶ್ ಕಳೆದ ವಾರದಲ್ಲೇ ಜ್ವರದಿಂದ ನರಳುತ್ತಿದ್ದ ಹೀಗಾಗಿ ಶಾಲೆಗೆ ಹೋಗಲಾಗಲಿಲ್ಲ. ೫ ದಿವಸದ ಆಂಟಿಬಯೋಟೆಕ್ ಕೋರ್ಸ್ ಮುಗಿಸಿದ ನಂತರ ಗುರುವಾರದಿಂದ ಶಾಲೆಗೆ ಹೋಗುತ್ತಿದ್ದಾನೆ. ಶಾಲೆಯಲ್ಲಿ ಫ್ರೆಂಡ್ಸ್ ಶಿಪ್ ಡೇ ಆಚರಿಸಿದ.

ತಾ|| ಆಗಷ್ಟ್ ೩ ,ಅಕ್ಕನ ಮಗಳು ಕು|| ಭೂಮಿಕಾಳ ಹುಟ್ಟಿದ ಹಬ್ಬಕ್ಕೆ ಶುಭಾಷಯ ಕೋರಿದೆ. ಹಾಗೇ ಜಾಂಡೀಸ್ ನಿಂದ ಬಳಲಿ ಚೇತರಿಸಿಕೊಳ್ಳುತ್ತಿರುವ ಕು|| ಅಂಜು ಗೆ ಬೇಗ ಚೇತರಿಸಿಕೋ ಎಂದು ಹಾರೈಸಿದೆ.

ನನ್ನ ಅಣ್ಣ ಅನಂತು ಗೇ ಫೋನ್ ಮಾಡಿದ್ದೆ.

ಇನ್ನು ಶ್ರೀಮತಿಗಂತೂ ಸಂಭ್ರಮವೋ ಸಂಭ್ರಮ, ಆಷಾಡ ಮುಗಿದು ಶ್ರಾವಣದ ಹಬ್ಬಗಳ ಸಾಲು ಸಾಲು ಕೈಬೀಸಿ ಕರೆಯುತ್ತಿರುವುದು ಸಂಭ್ರಮಕ್ಕೆ ಕಾರಣವಾದರೆ ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳ ಖರೀದಿಯೊ ಅವಳಲ್ಲಿ ಹೊಸ ಹುಮ್ಮಸ್ಸನ್ನು ಹೆಚ್ಚಿಸಿದೆ.ಭೀಮನ ಅಮಾವಾಸ್ಯೆ, ನಾಗರ ಪಂಚಮಿ, ಮಳೆಯ ವಾತಾವರಣ ಮನದಲ್ಲಿ ಬೇಸರದ ಕ್ಷಣಗಳನ್ನು ಸ್ವಲ್ಪವಾದರೂ ಕಳೆಯಿತೆನ್ನಬಹುದು.

ಒಟ್ಟಾರೆ ಈ ವಾರ ಮಿಶ್ರ ಫಲದ ವಾರವೆಂದರೆ ತಪ್ಪಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ