ಈ ವಾರ ಪೂರ್ತಿ ಅನಾರೋಗ್ಯ ನನ್ನ ಹಾಗು ನನ್ನ ಕುಟುಂಬವನ್ನು ಆವರಿಸಿತ್ತು. ಅತಿಯಾದ ಚಳಿಯಿಂದ ನೆಗಡಿ-ಕೆಮ್ಮು ಹಾಗು ಜ್ವರದಿಂದ ಬಳಲಿದೆವು. ಒಟ್ಟಾರೆ ಕುಟುಂಬದವರೆಲ್ಲಾ ಹಾಸಿಗೆಯನ್ನೇ ಅವಲಂಬಿಸಿದ್ದೆವು. ವಾರ ಪೂರ್ತಿ ತುಂಬಾ ಬೋರಾಯಿತು. ಆ ಬೋರಿನಲ್ಲೂ ಶ್ರೀಮತಿ ಸುಧಾಮೊರ್ತಿಯವರ " ಮನದ ಮಾತು" ಪುಸ್ತಕ ಓದಿದೆ. ಮನಸ್ಸಿಗೆ ಸ್ವಾಂತನ (ತಂಪು) ನೀಡುವ ಅನುಭವವಾಯಿತು.
ಆನೀಶ್ ಸ್ಕೂಲಿಗೆ ಚಕ್ಕರ್ ಹಾಕಿದ. ವಾರಕ್ಕೊಂದು ದಿನವಾದರೂ ಸ್ಕೂಲಿಗೆ ರಜೆ ಹಾಕುತ್ತಿದ್ದಾನೆ, ಒಂದು ರೀತಿಯ ಆತಂಕಯಿದೆ ಮನದಲ್ಲಿ ( ಆದಷ್ಟು ಅವನಿಗೆ ಶಕ್ತಿ ಬರಲಿ).
ಇನ್ನು ಶ್ರೀಮತಿ ಸೌಮ್ಯ ಅಸಿಡಿಟಿಯಿಂದ ಬಹಳ ಒದ್ದಾಡಿದಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ