ಮರೆಯಾದ ಚೇತನ
ಒಂದು ಚೈತನ್ಯದ ಚಿಲುಮೆಯೊಂದು ನಮ್ಮನ್ನು ಅಗಲಿತು
ಮನದ ಮೊಲೆಯಲ್ಲಿ ನೂರು ನೋವಿನ ಜ್ವಾಲೆಯ ಹುಟ್ಟುಹಾಕಿತು
ಏಕೆ ಮರೆಯಾದೆ ಓ ಚೇತನವೇ?
ನಮ್ಮನ್ನು ಅಗಲಿದೆ ಏಕೆ ಚೇತನವೇ?
ಸದಾ ನಗುಮುಖ, ಚೈತನ್ಯದ ಚಿಲುಮೆ
ಹಾಸ್ಯ,ತುಟಿಯಲ್ಲಿ ಸದಾ ನಗುವಿನ ಲಾಸ್ಯ
ಪ್ರೇರಕ ಶಕ್ತಿ,ಮನದಲ್ಲಿ ಪ್ರಶಾಂತತೆ;
ಇಂದು ಮರೆಯಾಯಿತೇಕೆ?
ಓ ಚೇತನವೇ! ಓ ಆತ್ಮಶಕ್ತಿಯೇ!
ನೀನು ನಮ್ಮಲ್ಲಿ ನೆಲೆಗೊಳ್ಳು ಎಂದೆಂದಿಗೂ
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ\\
ತುಂಬಾ ದುಃಖದ ದಿನ ಇಂದು. ನನ್ನ ಆತ್ಮೀಯ ಗೆಳೆಯ ಸುನಿಲ್ ನ ತಂದೆ ಶ್ರಿ.ಬಿ.ಗೋಪಾಲ್ ರವರು ಇಂದು ತೀರಿಕೊಂಡರು. ಸದಾ ನಗುಮುಖದ, ಚೈತನ್ಯದ ಚಿಲುಮೆಯಾದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನನಗಂತೂ ತುಂಬಾ ನೋವಾಗಿದೆ ಮನಸ್ಸಿಗೆ. ಅವರ ಆತ್ಮಕ್ಕೆ ಚಿರಶಾಂತಿ ಆ ಪರಮಾತ್ಮ ದಯಪಾಲಿಸಲಿ. ಅವರ ಕುಟುಂಬದ ಸದಸ್ಯರಿಗೆ ಅದನ್ನು ಭರಿಸುವ ಶಕ್ತಿ ಪರಮಾತ್ಮ ನೀಡಲಿ ಎಂದು ಪ್ರಾರ್ಥಿಸುತ್ತೇನೆ.